All About SBI FASTAG , Recharge , Registration , Tag Replacement , Dealership

ಫಾಸ್ಟ್ಯಾಗ್ Fastag in kannada

Image result for fastag
ಡಿ. ತಿಂಗಳ ಆರಂಭದಿಂದಲೇ(ಡಿ.1) ಎಲ್ಲ ಹೊಸ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್‌ ಕಡ್ಡಾಯವಾಗಲಿದೆ. ಅಧಿಕೃತ ಡೀಲರ್‌ಗಳು ಇಲ್ಲವೇ ವಾಹನ ತಯಾರಕರು ವಾಹನದ ಮುಂಭಾಗದ ವೈಂಡ್‌ಸ್ಕ್ರೀನ್‌ ಮೇಲೆ ಫಾಸ್ಟ್ಯಾಗ್‌ ಅನ್ನು ಅಳವಡಿಸಬೇಕು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಸ್ತುತ 370 ಟೋಲ್‌ ಗೇಟ್‌ಗಳಲ್ಲಿ ಫಾಸ್ಟ್ಯಾಗ್‌ ಬಳಕೆಗೆ ಅವಕಾಶವಿದೆ. ಸಾರಿಗೆ ಇಲಾಖೆಯು ಈ ಸಂಬಂಧ ಆದೇಶ ಹೊರಡಿಸಿದೆ. ಹೊಸ ವಾಹನಗಳಿಗೆ ಫಾಸ್ಟ್ಯಾಗ್‌ ಕಡ್ಡಾಯವಾಗಲಿದ್ದು, ಹಳೆಯ ವಾಹನಗಳಿಗೆ ಕಡ್ಡಾಯವೇನಿಲ್ಲ. ಸಮಯ, ಶ್ರಮ ಉಳಿಸುವ ಮಂದಿ ಇವುಗಳನ್ನು ಪಡೆಯಬಹುದು.
ಏನಿದು ಫಾಸ್ಟ್ಯಾಗ್‌?
ಟೋಲ್‌ಗೇಟ್‌ಗಳಲ್ಲಿ ಡಿಜಿಟಲ್‌ ಮಾದರಿಯಲ್ಲಿ ಸುಂಕ ಪಾವತಿ ವ್ಯವಸ್ಥೆಯೇ ಫಾಸ್ಟ್ಯಾಗ್‌. ಎಟಿಎಂ ಕಾರ್ಡ್‌ ಮಾದರಿಯಲ್ಲಿರುವ ಈ ಫಾಸ್ಟ್ಯಾಗ್‌ ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್‌ ತಂತ್ರಜ್ಞಾನದ ಅನ್ವಯ ಕೆಲಸ ಮಾಡುತ್ತದೆ. ವಾಹನದ ಮುಂಭಾಗದ ಗಾಜಿನ ಮೇಲೆ ಫಾಸ್ಟ್ಯಾಗ್‌ ಅನ್ನು ಅಂಟಿಸಲಾಗುತ್ತದೆ. ಟೋಲ್‌ಗೇಟ್‌ಗಳಲ್ಲಿ ಇವುಗಳನ್ನು ಗುರ್ತಿಸುವ ಸಾಧನಗಳಿರುತ್ತವೆ. ಟೋಲ್‌ಗೇಟ್‌ನಲ್ಲಿ ವಾಹನ ಸಾಗಿದರೆ, ಬಳಕೆದಾರನ ಪ್ರೀಪೇಯ್ಡ್‌ ಅಥವಾ ಉಳಿತಾಯ ಖಾತೆಯಿಂದ ಟೋಲ್‌ ಶುಲ್ಕ ಪಾವತಿಯಾಗುತ್ತದೆ. ವ್ಯವಹಾರ, ಲೋ ಬ್ಯಾಲೆನ್ಸ್‌ ಕುರಿತಾಗಿ ಎಸ್‌ಎಂಎಸ್‌ ಅಲರ್ಟ್‌ ಬರುತ್ತದೆ.
ಈ ಫಾಸ್ಟ್ಯಾಗ್‌ಗಳ ಅವಧಿ 5 ವರ್ಷಗಳಾಗಿದ್ದು, ಅಗತ್ಯವಿರುವಷ್ಟು ಹಣವನ್ನು ರೀಚಾರ್ಜ್‌ ಮಾಡಬಹುದಾಗಿದೆ.
Image result for fastag
ಏನಿದರ ಅನುಕೂಲ?
ಟೋಲ್‌ಗೇಟ್‌ಗಳ ಬಳಿ ಟ್ರಾಫಿಕ್‌ ಜಾಮ್‌ ಸಹಜ. ಟೋಲ್‌ ಪಾವತಿಸಲು ವಾಹನಗಳ ಸಾಲು ದೊಡ್ಡದಾಗುತ್ತದೆ. ನಗದು ಪಾವತಿಸುವಾಗ ಚಿಲ್ಲರೆ ಸಮಸ್ಯೆಯೂ ಎದುರಾಗಬಹುದು. ಆದರೆ, ಫಾಸ್ಟ್ಯಾಗ್‌ ಸಮಯ ಮತ್ತು ಶ್ರಮ ಎರಡನ್ನೂ ಉಳಿಸುತ್ತದೆ. ಫಾಸ್ಟ್ಯಾಗ್‌ ಕಾರ್ಡ್‌ಗಳನ್ನು ಗುರ್ತಿಸಲು ಅನೇಕ ಟೋಲ್‌ಗಳಲ್ಲಿ ಪ್ರತ್ಯೇಕ ಪಥಗಳನ್ನೇ ನಿರ್ಮಿಸಲಾಗಿದೆ.
ಫಾಸ್ಟ್ಯಾಗ್‌ ಹೊಂದಿರುವ ವಾಹನಗಳು ಸುಲಭವಾಗಿ ಮುಂದೆ ಹೋಗುವ ಕಾರಣ, ಟ್ರಾಫಿಕ್‌ ಜಾಮ್‌ ಸಮಸ್ಯೆಯಿಲ್ಲ. ಸಮಯ, ಇಂಧನ, ಚಿಲ್ಲರೆ ಸಮಸ್ಯೆಗೆ ಇದು ಸೂಕ್ತ ಪರಿಹಾರ.
ಎಲ್ಲಿ ಸಿಗುತ್ತೆ ಇದು?
ಟೋಲ್‌ ಫ್ಲಾಜಾಗಳಲ್ಲಿ ಫಾಸ್ಟ್ಯಾಗ್‌ ಖರೀದಿಸಬಹುದು. ಇಲ್ಲವೇ, ಕೆಲವು ನೋಂದಾಯಿತ ಬ್ಯಾಂಕ್‌ಗಳಲ್ಲಿ ಲಭ್ಯ. ಪ್ರಸ್ತುತ ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ, ಸಿಂಡಿಕೇಟ್‌, ಏಕ್ಸಿಸ್‌, ಐಡಿಎಫ್‌ಸಿ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಲಭ್ಯ ಇವೆ. ಅಲ್ಲದೇ ಪೇಟಿಎಂನಲ್ಲೂ ಸಿಗುತ್ತವೆ. ವಾಹನದ ಮಾಲೀಕನು ಅವುಗಳನ್ನು ಖರೀದಿಸಿ ತನ್ನ ವಾಹನಕ್ಕೆ ಅಳವಡಿಸಿಕೊಳ್ಳಬಹುದು. ಬ್ಯಾಂಕ್‌ಗಳ ಮೂಲಕ ರೀಚಾರ್ಜ್‌ ಮಾಡಬಹುದು. ಇಲ್ಲವೇ, ಆನ್‌ಲೈನ್‌ನಲ್ಲಿ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಎನ್‌ಇಎಫ್‌ಟಿ, ಆರ್‌ಟಿಜಿಎಸ್‌ ಅಥವಾ ನೆಟ್‌ ಬ್ಯಾಂಕಿಂಗ್‌ -ಹೀಗೆ ರೀಚಾರ್ಜ್‌ಗೆ ನಾನಾ ಮಾರ್ಗಗಳಿವೆ.
ಎಷ್ಟು ರೀಚಾರ್ಜ್‌ ಮಾಡಬಹುದು?
ಕನಿಷ್ಠ 100 ರೂಪಾಯಿಯಿಂದ ಗರಿಷ್ಠ 1 ಲಕ್ಷ ರೂ ತನಕ ನಿಮ್ಮ ಅಗತ್ಯಾನುಸಾರ ಫಾಸ್ಟ್ಯಾಗ್‌ಗಳಿಗೆ ಹಣವನ್ನು ರೀಚಾರ್ಜ್‌ ಮಾಡಬಹುದು. ಇವುಗಳನ್ನು ಒಬ್ಬರು ಇನ್ನೊಬ್ಬರಿಗೆ ವರ್ಗಾಯಿಸುವಂತಿಲ್ಲ. ಒಂದು ವಾಹನಕ್ಕೆ ಒಂದು ಫಾಸ್ಟ್ಯಾಗ್‌.…
Image result for fastag
=====
ಫಾಸ್ಟ್ಯಾಗ್‌ ಪಡೆಯಲು ಏನು ಬೇಕು?
ಅರ್ಜಿದಾರನ ಬಳಿ ವಾಹನದ ನೋಂದಣಿ ಪ್ರಮಾಣಪತ್ರ(ಆರ್‌ಸಿ) ಇರಬೇಕು.
ವಾಹನ ಮಾಲೀಕನ ಪಾಸ್‌ಪೋರ್ಟ್‌ ಗಾತ್ರದ ಫೋಟೊ
ಡ್ರೈವಿಂಗ್‌ ಲೈಸೆನ್ಸ್‌, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌, ವೋಟರ್‌ ಐಡಿ ಅಥವಾ ಆಧಾರ್‌ ಕಾರ್ಡ್‌ನಂಥ ಕೆವೈಸಿ ದಾಖಲೆಗಳು.
ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ :- 9986931888
Share:
Copyright © FasTag | Powered by Blogger Distributed By Protemplateslab & Design by ronangelo | Blogger Theme by NewBloggerThemes.com